Home / History
HISTORY
ಆಗ್ನೆಯ ಕರ್ನಾಟಕದಲ್ಲಿ ಕ್ರಿ.ಶ. 8ನೇ ಶತಮಾನದ ಮಧ್ಯಭಾಗದಿಂದ 11ನೇ ಶತಮಾನದವರೆಗೆ ನೊಳಂಬರು ಅಥವಾ ನೊಳಂಬ ಪಲ್ಲವರು ತಮ್ಮ ಶಕ್ತಿ ಹಾಗೂ ಪ್ರಭಾವವನ್ನು ಪ್ರದರ್ಶಿಸಿದರು.
ಇವರ ಪ್ರಾರಂಭಿಕ ರಾಜಧಾನಿ ಆಂಧ್ರಪ್ರದೇಶದ ಮಡಕಶಿರ ತಾಲ್ಲೂಕಿನಲ್ಲಿರುವ ಹೆಂಜೇರು ಅಥವಾ ಹೇಮಾವತಿಯಾಗಿತ್ತು. ನಂತರ, ಕ್ರಿ.ಶ. 11ನೇ ಶತಮಾನದಲ್ಲಿ ಈ ರಾಜಧಾನಿಯನ್ನು ತುಂಗಭದ್ರಾ
ತೀರದ ಕಂಪಲಿಗೆ ವರ್ಗಾಯಿಸಲಾಯಿತು.
ಪ್ರಾರಂಭದಲ್ಲಿ ಸಾಸಿರವೆಂಬ ಸಣ್ಣ ಪ್ರದೇಶದ ಮೇಲೆ ಆಳ್ವಿಕೆ ನಡೆಸುತ್ತಿದ್ದ ನೊಳಂಬರು ಕ್ರಿ.ಶ. 9-10ನೇ ಶತಮಾನಗಳಲ್ಲಿಗೆ ಬಲಿಷ್ಠರಾಜ್ಯ ನಿರ್ಮಿಸಿದರು.
ನೊಳಂಬವಾಡಿ 32000 ಎಂದು ಕರೆಯಲ್ಪಡುವ ಈ ರಾಜ್ಯದಲ್ಲಿ ಈಗಿನ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಕಡೂರು,
ಬಳ್ಳಾರಿ, ಅನಂತಪುರ ಮತ್ತು ಧರ್ಮಪುರಿ ಪ್ರದೇಶಗಳು ಸೇರಿದ್ದವು. ತಲಕಾಡಿನ ಗಂಗರ ಮೇಲೆ ಪ್ರಭಾವ ಸಾಧಿಸಿದ
ನೊಳಂಬರು, ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಳುಕ್ಯರ ಸಾಮಂತರಾಗಿ ಕೂಡ ಆಳ್ವಿಕೆ ನಡೆಸಿದರು. ಅವರು ತೆಲುಗು
ಚೋಳರು, ಬಾಣರು, ವೈಡುಂಬರು ಮೊದಲಾದ ಅಕ್ಕಪಕ್ಕದವರನ್ನು ಸೋಲಿಸಿ ತಮ್ಮ ಪ್ರಾಬಲ್ಯವನ್ನು ಮೆರೆದರು.
ನೊಳಂಬರು ಕೇವಲ ರಾಜಕೀಯ ಬಲವರ್ಧಕರಾಗಿದ್ದಷ್ಟೇ ಅಲ್ಲದೆ, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಕೂಡ ಹೆಚ್ಚಿಸಲು
ಪ್ರಮುಖ ಪಾತ್ರವಹಿಸಿದರು. ಇವರ ಕಾಲದಲ್ಲಿ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗೆ ಉನ್ನತ ಪ್ರೋತ್ಸಾಹ ದೊರೆಯಿತು. ಈ
ಕಲಾಶೈಲಿಯ ಉದಾಹರಣೆಯಾಗಿರುವ ಹೇಮಾವತಿಯ ದೇವಾಲಯಗಳು ಇಂದಿಗೂ ಸಹ ನೊಳಂಬರ ಶ್ರೇಷ್ಠತೆಯನ್ನು ತೋರಿಸುತ್ತವೆ.
ಆವನಿ,
ನಂದಿ, ಬರಗೂರು, ಧರ್ಮಪುರಿ ಮೊದಲಾದ ಸ್ಥಳಗಳಲ್ಲಿ ನೊಳಂಬ ಶಿಲ್ಪಕಲೆಯ ಅವಶೇಷಗಳನ್ನು ಕಾಣಬಹುದು. ಈ ಕೃತಿಗಳು
ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ.
ನೊಳಂಬರ ಇತಿಹಾಸ ಕನ್ನಡದ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದು, ಕೃಷಿ, ಪಶುಪಾಲನೆ, ಶಿಲ್ಪಕಲೆ, ಮತ್ತು ದೇಗುಲ
ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆ ನೀಡಿದೆ. ನೊಳಂಬ ಶಿಲ್ಪಶೈಲಿಯ ವೈಶಿಷ್ಟ್ಯ, ಹೊಯ್ಸಳರ ಕಾಲದಲ್ಲಿಯೂ
ಮುಂದುವರಿಯಿತು. ನೊಳಂಬರ ಶ್ರೇಷ್ಠ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ನೊಳಂಬ
ಲಿಂಗಾಯತರು ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದರು.
1906ರಲ್ಲಿ ಕಂಬಿ ಸಿದ್ದರಾಮಣ್ಣನವರು ವಿದ್ಯಾರ್ಥಿಗಳ ಸಹಾಯಕ್ಕಾಗಿ ಆರಂಭಿಸಿದ ಈ ಚಟುವಟಿಕೆ, 1936ರಲ್ಲಿ
ಶ್ರೀಮದ್ವೀರಶೈವ ವಿದ್ಯಾಪ್ರಚಾರಕ ಸಂಘವು ಸ್ಥಾಪಿತವಾಗಿ, ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ 1942
ರಲ್ಲಿ ನೊಳಂಬ ವೀರಶೈವ ಸಮಾಜ ಸುಧಾರಣಾ ಸಂಘವಾಗಿ ಬೆಳೆಯಿತು. ಈ ಸಂಘವು ಶಿಕ್ಷಣ, ಸಾಂಸ್ಕೃತಿಕ, ಮತ್ತು ಧಾರ್ಮಿಕ
ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತಿದೆ.
ನೊಳಂಬ ಲಿಂಗಾಯತ ಸಂಘವು ಈಗ ರಾಜ್ಯಾದ್ಯಂತ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ದೇವಸ್ಥಾನಗಳ ಜೀರ್ಣೋದ್ದಾರ, ಮತ್ತು
ಸಮುದಾಯ ಭವನಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ. 2025ರ ಹೊತ್ತಿಗೆ ಹೊಸ ವಾಣಿಜ್ಯ ಸಂಕೀರ್ಣ, ಡಿಜಿಟಲ್
ಲೈಬ್ರರಿ, ಮತ್ತು ಹೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ವಸತಿ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ತತ್ವಗಳನ್ನು ಸಮುದಾಯದ ಕಣಕಣಕ್ಕೂ ತಲುಪಿಸುವ ಪ್ರಯತ್ನದಲ್ಲಿ ಈ ಸಂಘವು ಜಯಂತಿ
ಕಾರ್ಯಕ್ರಮಗಳು, ಸಾಮಾಜಿಕ ಸೇವಾ ಯೋಜನೆಗಳು, ಮತ್ತು ಶೈಕ್ಷಣಿಕ ಪ್ರೋತ್ಸಾಹವನ್ನು ಮುಂದುವರಿಸುತ್ತಿದೆ. ನೊಳಂಬ
ಲಿಂಗಾಯತ ಸಮುದಾಯದ ಏಳಿಗೆಗಾಗಿ ಈ ಸಂಘವು ನಿತ್ಯ ಶ್ರಮಿಸುತ್ತಿದ್ದು, ನಾಳೆಯ ಬೆಳಕಿಗೆ ದಾರಿ ತೋರುತ್ತಿದೆ.
The Nolamba community's history occupies an important position in Karnataka's cultural legacy.
They have made important contributions to sculpting, temple building, agriculture and animal husbandry.
During the Hoysala era, the unique Nolamba architectural and artistic traditions persisted. In addition
to supporting political, economic and social advancement, the Nolamba Lingayatha community has been dedicated
to maintaining its rich educational and cultural heritage.
Kambi Siddaramanna started helping students in 1906 as part of his community duty, and this eventually led to the founding
of the Shrimad Veerashaiva Vidyapracharaka Sangha in 1936. In 1942, it changed its name to the Nolamba Veerashaiva Samaja
Sudharana Sangha in order to broaden its operations. The Sangha has made significant contributions to the domains of education,
culture and religion.
The Nolamba Lingayatha Sangha is currently actively engaged in establishment of student hostels and Samudaya Bhavans throughout the state.
It plans to establish a digital library, a new commercial complex, skill development training centre and to increase accommodation for students.
The Sangha hosts the yearly Sri Guru Siddharameshwara Jayanti with the goal of promoting teachings of Shri Shivayogi Siddharameshwaraa,
charitable endeavours and educational events, provision of scholarships for meritorious students. As a symbol of optimism and advancement for future,
the Sangha is always working to improve the wellbeing of the Nolamba Lingayatha community.