Loading...

ABOUT US




ನೊಳಂಬರು, ಕ್ರಿ.ಶ. 8ನೇ ಶತಮಾನದಿಂದ 11 ನೇ ಶತಮಾನದವರೆಗೆ ಆಗ್ನೇಯ ಕರ್ಣಾಟಕದಲ್ಲಿ ಆಳ್ವಿಕೆ ನಡೆಸಿದ ಮಹತ್ವದ ರಾಜವಂಶ. ಇವರ ಮೂಲ ರಾಜಧಾನಿ ಆಂಧ್ರಪ್ರದೇಶದ ಹೇಮಾವತಿಯಾಗಿದ್ದು (ಹೆಂಜೇರು), ನಂತರ ತುಂಗಭದ್ರಾ ತೀರದ ಕಂಪಲಿಗೆ ವರ್ಗಾಯಿಸಲಾಯಿತು. ಈ ವಂಶದ ಅರಸರು ಚಿತ್ರದುರ್ಗ, ಕೋಲಾರ, ಧರ್ಮಪುರಿ, ತುಮಕೂರು, ಚಿಕ್ಕಬಳ್ಳಾಪುರ, ಅನಂತಪುರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದರು. ರಾಷ್ಟ್ರಕೂಟರು, ಗಂಗರು ಮತ್ತು ಚಾಳುಕ್ಯರೊಂದಿಗೆ ನಡೆದ ಯುದ್ಧಗಳಲ್ಲಿ ತಾವು ಉತ್ತಮ ಯೋಧರೆಂದು ತೋರಿಸಿದರು. ಇವರ ರಾಜ್ಯಾಧಿಕಾರದ ಅವಧಿಯಲ್ಲಿ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಲ್ಲಿ ವಿಶಿಷ್ಟ ಪ್ರೋತ್ಸಾಹ ದೊರೆತು, ನೊಳಂಬಕಲಾಶೈಲಿ ಅಭಿವೃದ್ಧಿಯಾಯಿತು. ನೊಳಂಬರ ಶಾಸನಗಳಿಂದ ಬಹಳಷ್ಟು ಮಹತ್ವದ ಮಾಹಿತಿ ದೊರಕಿದ್ದು, ಈ ವಂಶದ ಶ್ರೇಯಸ್ಸು ಬನ್ನುಗುಪ್ಪೆ, ಹೇಮಾವತಿ ಮತ್ತು ನಂದಿಯಂತಹ ಸ್ಥಳಗಳಲ್ಲಿ ಕಂಡುಬರುತ್ತದೆ. 11ನೇ ಶತಮಾನದಲ್ಲಿ ಚಾಳುಕ್ಯರ ಮತ್ತು ಹೊಯ್ಸಳರ ಕಾಲದಲ್ಲಿ ಈ ವಂಶದ ಪ್ರಭಾವವು ಕುಗ್ಗಿತು. ನೊಳಂಬರ ಇತಿಹಾಸ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದು, ಈ ವಂಶವು ಕರ್ನಾಟಕದ ಗತಕಾಲದ ವೈಭವವನ್ನು ಪ್ರತಿಬಿಂಬಿಸುತ್ತದೆ.



A notable dynasty that dominated southeast Karnataka from the eighth to eleventh centuries was the Nolambas. Hemavati ( Henjeru ), in modern-day Andhra Pradesh, served as their first capital until being replaced by Kampli, on the banks of the Tungabhadra River. The Nolambas were descended from the Pallavas, according to historical evidence. The Nolamba kings consolidated their power over areas like as Bengaluru, Tumkur, Dharmapuri, Kolar, and Chitradurga. They demonstrated their strength as warriors in conflicts with the Gangas, Chalukyas and Rashtrakutas. During their rule, sculpture and architecture received significant support, which led to the development of the unique Nolamba art style. The contributions and accomplishments of the Nolambas are largely revealed via engraved and inscribed material, with locations such as Bannuguppe, Hemavati and Nandi showcasing the splendour of this dynasty. Their influence declined in the 11th century during the period of the Chalukyas and Hoysalas. In Karnataka's rich cultural heritage, the Nolambas' past occupies a significant position, demonstrating the state's historical excellence.

PRESIDENT'S MESSAGE


ಆತ್ಮೀಯ ಸಮಾಜ ಬಾಂಧವರೇ, ನಿಮಗೆಲ್ಲ ನಮ್ಮ ಸಂಘದ ವತಿಯಿಂದ ಹಾರ್ದಿಕ ಶುಭಾಶಯಗಳು

ನಮ್ಮ ಸಂಘವು ಪ್ರಾರಂಭವಾಗಿ ಸುಮಾರು 87 ವರ್ಷಗಳು ತುಂಬಿದ್ದು, ಆರಂಭದಲ್ಲಿ ಆರ್ಥಿಕ ಕಷ್ಟಕರ ಪರಿಸ್ಥಿತಿಯಲ್ಲಿದ್ದು ಸುಮಾರು ವರ್ಷಗಳು ಜಡತ್ವವಾಗಿದ್ದು ತಿಪಟೂರಿನಲ್ಲಿ ಸ್ಥಾಪಿತವಾದ ನೊಳಂಬ ಇತಿಹಾಸ ಪರಿಷತ್ ಸಂಘ ದೊಂದಿಗೆ ವಿಲೀನವಾಗಿ ಆಗಿನ ಸಮಾಜ ಸುಧಾರಣಾ ಸಂಘವೆಂಬ ಹೆಸರನ್ನು ನೊಳಂಬ ವೀರಶೈವ ಸಂಘವಾಗಿ ಬದಲಾವಣೆ ಹೊಂದಿ ಶ್ರೀ ಗುರುಸಿದ್ದರಾಮೇಶ್ವರ ಜಯಂತಿಯನ್ನು ಪ್ರಾರಂಭ ಮಾಡುವ ಮೂಲಕ ಹಲವಾರು ತರುಣರು ಹಾಗೂ ಸಹೃದಯರಾದ ಹಿರಿಯರುಗಳು ದೃಢ ಹೆಜ್ಜೆ ಇಟ್ಟಿದ್ದರಿಂದ ಸಂಘವು ಒಂದೊಂದೇ ಹೆಜ್ಜೆಯನ್ನಿಟ್ಟು ಬೆಳವಣಿಗೆ ಹೊಂದಲು ಸಾಧ್ಯವಾಯಿತು.

ಸಂಘದ ಆರ್ಥಿಕ ಪರಿಸ್ಥಿತಿಯು ಸಂಕಷ್ಟದಲ್ಲಿದ್ದಾಗ 1980 ರಲ್ಲಿ ಕಂಬಿ ಎಂ. ಸಿದ್ದರಾಮಣ್ಣನವರು ದಾನವಾಗಿ ಕೊಟ್ಟಿದ್ದ ಚಿಕ್ಕಪೇಟೆ ಮನೆಯನ್ನು ತೆರವುಗೊಳಿಸಿ, ಒಂದು ವಾಣಿಜ್ಯ ಸಂಕೀರ್ಣವನ್ನು ಕಟ್ಟಿದ ನಂತರ, ಅದರಿಂದ ಬಂದ ಆದಾಯದಿಂದ ಬೆಂಗಳೂರಿನ ಬಸವೇಶ್ವರನಗರದಲ್ಲಿ, ಕಂಬಿ ಸಿದ್ದರಾಮಣ್ಣ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಲಾಯಿತು.

ನೊಳಂಬ ಸಾಮ್ರಾಜ್ಯದ ರಾಜಗುರುವಾದ ಶ್ರೀ ಗುರುಸಿದ್ದರಾಮೇಶ್ವರ ಜಯಂತಿಯನ್ನು 1974 ರಿಂದ, ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಆಚರಿಸುತ್ತ ಬಂದಿದ್ದು, ಉಳಿದ ಹಣಕಾಸಿನ ನೆರವಿನಿಂದ ಅರಸೀಕೆರೆ, ಗುಬ್ಬಿ, ತುರುವೇಕೆರೆ, ಅಜ್ಜಂಪುರ, ಹೊಸದುರ್ಗ ಹಾಗೂ ಹಾವೇರಿ ಕೇಂದ್ರಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಯಿತು. ಇವುಗಳಿಂದ ಬಂದ ಸಂಪನ್ಮೂಲವನ್ನು ಸಮಾಜದ ಅಭಿವೃದ್ಧಿಗೆ ಬಳಸಲಾಗಿದ್ದು, ವಿದ್ಯಾಭ್ಯಾಸಕ್ಕೆ ಪೂರಕವಾಗಿ ಬೆಂಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ತೆರೆದು ಸಮಾಜಮುಖಿಯಾಗಿ ಹೆಜ್ಜೆ ಇಟ್ಟಿದ್ದೇವೆ.

ಪೂರಕವಾಗಿ ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಬಹಳಷ್ಟು ವಿದ್ಯಾರ್ಥಿಗಳು ಸರ್ಕಾರದ ಹುದ್ದೆಗಳಲ್ಲಿ, ತಂತ್ರಜ್ಞಾನ, ಅಭಿಯಂತರ, ವೈದ್ಯರು, ವಕೀಲರು, ಕೈಗಾರಿಕೋದ್ಯಮಿಗಳು ಹಾಗೂ ಇತರೆ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಮಾಜಕ್ಕೆ ಹೆಮ್ಮೆಯ ವಿಚಾರ.
ಸಂಘದ ದ್ಯೇಯೋದ್ಧೇಶ ಹಾಗೂ ಎಲ್ಲಾ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವುದು ಮುಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ.ಅವರುಗಳಿಗೆ ಮಾರ್ಗದರ್ಶನ ನೀಡುವುದು ಎಲ್ಲಾ ಹಿರಿಯರು, ರಾಜಕೀಯ ಮುಖಂಡರು ಹಾಗೂ ಗುರುಗಳ ಜವಾಬ್ದಾರಿಯಾಗಿರುತ್ತದೆ ಎಂದು ಭಾವಿಸುತ್ತೇನೆ.

ಶರಣು ಶರಣಾರ್ಥಿಗಳು
ಶ್ರೀ ಬಿ.ಕೆ.ಚಂದ್ರಶೇಖರ್
ಅಧ್ಯಕ್ಷರು, ನೊಳಂಬ ಲಿಂಗಾಯತ ಸಂಘ (ರಿ.), ಬೆಂಗಳೂರು.



Greetings and best wishes to all of you on behalf of our Sangha.

As our Sangha proudly completes about 87 years since its establishment, it is inspiring to reflect on our journey. In its early days, the association faced significant financial difficulties and remained inactive for many years. Later, it merged with the Nolamba Ithihasa Parishat of Tiptur, and was renamed as the Nolamba Veerashaiva Association from its previous name, Samaja Sudharana Sangha. With the celebration of Shri Gurusiddharameshwara Jayanti, several enthusiastic youth and supportive elders , the association took firm steps towards growth and progress.

When the association faced financial hardships, a property in Chickpet which was donated by Kambi M. Siddaramanna was redeveloped and a commercial complex was built in 1980.The income generated from this was utilized to establish the Kambi Siddaramanna Students’ Hostel in Basaveshwaranagar, Bengaluru.

Since 1974, the Jayanti of Shri Gurusiddharameshwara has been celebrated in various locations across Karnataka. Utilizing the surplus funds, community halls were constructed in different places such as Arsikere, Gubbi, Turuvekere, Ajjampura, Hosadurga, and Haveri. The resources generated from these facilities have been dedicated to the development of the community. Additionally, as a step towards promoting education, hostels for boys and girls have been established in district centres including Bengaluru, Mysuru, Haveri, and Shivamogga, furthering the association’s commitment to social welfare. Additionally, the initiatives have benefitted underprivileged students from rural areas. Many of these students have secured government jobs and contribute as professionals in fields such as technology, engineering, medicine, law, Industrialists, entrepreneurship, and other sectors. This is a matter of pride for our community.

Carrying forward the vision and mission of the association as well as all its activities, is a responsibility for the next generation. Guiding them in this journey is a duty that rests with our senior members, political leaders, and spiritual guides.

Sharanu Sharanarthi,
Shri B.K. Chandrashekhar
President, Nolamba Lingayatha Sangha(Regd.), Bengaluru

ಶ್ರೀ ಗುರು ಸಿದ್ದರಾಮೇಶ್ವರರ 852ನೇ ಜಯಂತಿ ಮಹೋತ್ಸವ ದಿನಾಂಕ 14 & 15 ಜನವರಿ 2025 DAY - 2


VISION & MISSION


“ ನೊಳಂಬ ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಮೂಲಕ ಸಮಾಜದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿಗೆ ಅನುಕೂಲಕರವಾದ ಪರಿಸರವನ್ನು ರೂಪಿಸುವುದು. ”



“ To create an environment for holistic development of the Nolamba Lingayatha community, encompassing religious, cultural, educational, and social progress.”

presentation

“ನೊಳಂಬ ಲಿಂಗಾಯತ ಸಮಾಜವು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುತ್ತದೆ. ಶಿಕ್ಷಣ ಮತ್ತು ಸಮಾಜದ ಕ್ಷೇಮಾಭಿವೃದ್ಧಿಗೆ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ದಾನ ಮತ್ತು ದತ್ತಿಗಳನ್ನು ಸಮುದಾಯದ ಒಕ್ಕೂಟಕ್ಕಾಗಿ ಉಪಯೋಗಿಸುತ್ತದೆ.”



“ The Nolamba Lingayatha Sangha promotes religious and cultural heritage. It undertakes programs for education and welfare of the community. Donations and endowments will be utilized effectively for the holistic development of the community. ”

presentation

SERVICES


Service image

ವಿದ್ಯಾರ್ಥಿ ನಿಲಯಗಳು / HOSTELS

ನೊಳಂಬ ಲಿಂಗಾಯತ ಸಂಘವು ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾಗಲು ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿದೆ. ಈ ವಿದ್ಯಾರ್ಥಿ ನಿಲಯಗಳು ವಿದ್ಯಾಭ್ಯಾಸ ಮತ್ತು ವ್ಯಕ್ತಿತ್ವದ ಅಭಿವೃದ್ದಿಗೆ ಅನುಕೂಲಕರವಾದ ವಾತಾವರಣವನ್ನು ಒದಗಿಸುತ್ತವೆ.

The Noḷamba Lingayatha Sangha has established hostels to support the educational aspirations of students of the community. These hostels provide an environment conducive to both academic excellence and personality development.

Service image

ಸಮುದಾಯ ಭವನಗಳು / CONVENTION HALLS

ಸಮಾಜಸೇವೆ ಚಟುವಟಿಕೆಗಳ ಅಂಗವಾಗಿ, ನೊಳಂಬ ಲಿಂಗಾಯತ ಸಂಘವು ಕರ್ನಾಟಕದ ಹಲವು ಪ್ರದೇಶಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿದೆ.ಇದರಿಂದ ಬರುವ ಆದಾಯವನ್ನು ಸಂಘದ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿ ನಿಲಯಗಳನ್ನು ನಡೆಸಲು ಬಳಸಲಾಗುತ್ತದೆ.

As part of its social service initiatives, the Nolamba Lingayatha Sangha has constructed community halls in various places in Karnataka.Income generated from this will be used for development of the Sangha and for operation & maintenance of the hostels.

Service image

ವಾಣಿಜ್ಯ ಸಂಕೀರ್ಣಗಳು / COMMERCIAL COMPLEXES

ಸಮಾಜಸೇವೆ ಚಟುವಟಿಕೆಗಳಿಗೆ ಸಹಾಯವಾಗಲು, ನೊಳಂಬ ಸಂಘವು ಕರ್ನಾಟಕದ ವಿವಿಧ ಭಾಗಗಳಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದೆ. ಇದರಿಂದ ಬರುವ ಆದಾಯವನ್ನು ಸಂಘದ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿ ನಿಲಯಗಳನ್ನು ನಡೆಸಲು ಬಳಸಲಾಗುತ್ತದೆ.

To support its social service initiatives, the Nolamba Lingayatha Sangha has built commercial complexes in various parts of Karnataka. Income generated from this will be used for development of the Sangha and for operation & maintenance of the hostels.



87 YEARS OF COMMUNITY SERVICE

NUMBER OF HOSTELS

07

CONVENTION HALLS

06

COMPLEXES

02